MASTERMITRA

EDUCATION AND JOBS

Thursday, October 16, 2025

Karnataka State Civil Services (Mandatory Training for Promotion) Rules, 2025.

  MASTREMITRA       Thursday, October 16, 2025
Karnataka State Civil Services (Mandatory Training for Promotion) Rules, 2025.


ಅಧಿಸೂಚನೆ

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಕಾಯ್ದೆ, 1978 (1990 ರ ಕರ್ನಾಟಕ ಕಾಯ್ದೆ 14) ರ ಪ್ರಕರಣ 8ರ ಜೊತೆ ಓದಲಾದ ಪ್ರಕರಣ 3ರ ಉಪ ಪ್ರಕರಣ (1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಚಿಸಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಮುಂಬಡ್ತಿಗಾಗಿ ತರಬೇತಿ ಕಡ್ಡಾಯ) ನಿಯಮಗಳು, 2025ರ ಕರಡನ್ನು ಮೇಲೆ ಉಲ್ಲೇಖಿಸಿದ ಕಾಯ್ದೆಯ ಪ್ರಕರಣ 3ರ ಉಪ ಪ್ರಕರಣ (2)ರಲ್ಲಿ ಅಗತ್ಯಪಡಿಸಿರುವಂತೆ, ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ ಮತ್ತು ಅದು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳ ತರುವಾಯ ಸದರಿ ಕರಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಈ ಮೂಲಕ ತಿಳಿಯಪಡಿಸಲಾಗಿದೆ.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯಕ್ಕೆ ಮುಂಚೆ, ಸದರಿ ಕರಡುಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಯಾವುದೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ ಸುಧಾರಣೆಗಳು), ಬಹುಮಹಡಿಗಳ ಕಟ್ಟಡ, ಡಾ: ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು 560001 ಇವರಿಗೆ ಕಳುಹಿಸಬಹುದು.

ಕರಡು ನಿಯಮಗಳು

1 . ಶೀರ್ಷಿಕೆ, ಪ್ರಾರಂಭ ಮತ್ತು ಅನ್ವಯ:- (1) ಈ ನಿಯಮಗಳನ್ನು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ

(ಮುಂಬಡ್ತಿಗಾಗಿ ತರಬೇತಿ ಕಡ್ಡಾಯ) ನಿಯಮಗಳು, 2025 ಎಂದು ಕರೆಯತಕ್ಕದ್ದು. (2) ಈ ನಿಯಮಗಳು, ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು. (3) ಅನ್ವಯ: ಈ ನಿಯಮಗಳು ರಾಜ್ಯದ ನಾಗರಿಕ ಸೇವೆಗಳಲ್ಲಿ ಗ್ರೂಪ್ ಎ, ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳನ್ನು ಒಳಗೊಂಡಿರುವ ವೃಂದಗಳಲ್ಲಿ ಹುದ್ದೆಗಳನ್ನು ಹೊಂದಿರುವ ಸರ್ಕಾರಿ ನೌಕರರಿಗೆ ಅನ್ವಯಿಸುತ್ತವೆ.

ಮತ್ತು ಗ್ರೂಪ್-ಸಿ ಯಲ್ಲಿ ಚಾಲಕರ ಹುದ್ದೆಗಳನ್ನು ಹೊಂದಿರುವವರಿಗೆ ಮತ್ತು ಗ್ರೂಪ್-ಡಿ ಹುದ್ದೆಗಳನ್ನು ಹೊಂದಿರುವವರಿಗೆ ಮತ್ತು ಸರ್ಕಾರವು ಕಾಲಕಾಲಕ್ಕೆ ಅಧಿಸೂಚನೆ ಮಾಡಬಹುದಾದ ಇತರ ಹುದ್ದೆಗಳನ್ನು ಹೊಂದಿರುವವರಿಗೆ ಈ ನಿಯಮಗಳು ಅನ್ವಯಿಸತಕ್ಕದ್ದಲ್ಲ.

ಪರಂತು, ನಿಯಮ 4 ರಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ತರಬೇತಿಯ ಅಧಿಸೂಚನೆಯ ದಿನಾಂಕದಿಂದ ಎರಡು ವರ್ಷಗಳೊಳಗೆ ವಯೋ ನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರಿಗೆ ಈ ನಿಯಮಗಳಲ್ಲಿರುವ ಯಾವುದೂ ಅನ್ವಯಿಸತಕ್ಕದ್ದಲ್ಲ.

2. ವ್ಯಾಖ್ಯಾನಗಳು: 

(1) ಈ ನಿಯಮಗಳಲ್ಲಿ, ಸಂದರ್ಭವು ಬೇರೆ ರೀತಿಯಲ್ಲಿ ಅಗತ್ಯಪಡಿಸದ ಹೊರತು,-

(i)  "ಸರ್ಕಾರ" ಎಂದರೆ ಕರ್ನಾಟಕ ಸರ್ಕಾರ:

(ii) "ತರಬೇತಿ" ಎಂದರೆ, ತರಬೇತಿಯ ಕೋರ್ಸ್, ನಿಯಮ 4 ಮತ್ತು 5 ರ ಅಡಿಯಲ್ಲಿ ಅಧಿಸೂಚಿಸಿದಂತೆ ಆಫ್‌ಲೈನ್ ಅಥವಾ ಆನ್‌ಲೈನ್ ಅಥವಾ ಹೈಬ್ರಿಡ್ ತರಬೇತಿ

(2) ಪ್ರಸ್ತಾಪಿತ ಕರಡು ನಿಯಮಗಳಲ್ಲಿ ಬಳಸಲಾದ ಮತ್ತು ಪರಿಭಾಷಿಸದೇ ಇರುವ ಪದಗಳಿಗೆ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957 ರಲ್ಲಿ ಪರಿಭಾಷಿಸಿರುವಂತೆ ಅನ್ವಯಿಸತಕ್ಕದ್ದು.

3. ಹೆಚ್ಚುವರಿ ಅರ್ಹತೆಯಾಗಿ ನಿರ್ದಿಷ್ಟ ತರಬೇತಿ.- ಯಾವುದೇ ಸೇವೆ ಅಥವಾ ಹುದ್ದೆಗೆ ಸಂಬಂಧಿಸಿದಂತೆ

ನಿರ್ದಿಷ್ಟ ತರಬೇತಿಯನ್ನು ಪೂರ್ಣಗೊಳಿಸುವುದನ್ನು ಬಡ್ತಿಗೆ ಅಗತ್ಯವಾದ ಅರ್ಹತೆಯಾಗಿ ನಿಗದಿಪಡಿಸಿ ವಿಶೇಷವಾಗಿ ರಚಿಸಲಾದ ನೇಮಕಾತಿ ನಿಯಮಗಳಿಗೆ ಹೆಚ್ಚುವರಿಯಾಗಿ ಈ ನಿಯಮಗಳು ಇರತಕ್ಕದ್ದು. ನಿಯಮ 4 ರಲ್ಲಿ ನಿರ್ದಿಷ್ಟ ಪಡಿಸಿದ ರೀತಿಯಲ್ಲಿ ತರಬೇತಿಯನ್ನು ಅಧಿಸೂಚನೆಯ ದಿನಾಂಕದಿಂದ ಆರು ತಿಂಗಳ ಅವಧಿಯೊಳಗೆ ಪೂರ್ಣಗೊಳಿಸದಿದ್ದಲ್ಲಿ ಯಾವುದೇ ಸರ್ಕಾರಿ ನೌಕರನು ಬಡ್ತಿಗೆ ಅರ್ಹನಾಗತಕ್ಕದ್ದಲ್ಲ.

ವಿವರಣೆ: ಈ ನಿಯಮಗಳು ಪ್ರಾರಂಭವಾದ ದಿನಾಂಕ ಮತ್ತು ನಿಯಮ 4 ರ ಅಡಿಯಲ್ಲಿ ತರಬೇತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಹೊರಡಿಸುವ ದಿನಾಂಕದ ನಡುವೆ ಬಡ್ತಿಯ ಸಂದರ್ಭ ಉಂಟಾದಲ್ಲಿ, ಈ ನಿಯಮಗಳ ಅಡಿಯಲ್ಲಿ ತರಬೇತಿಯನ್ನು ಉಲ್ಲೇಖಿಸದೆ ಬಡ್ತಿಗಳನ್ನು ಜಾರಿಗೆ ತರಬಹುದು.

4. ತರಬೇತಿಯ ನಿಗದಿಪಡಿಸುವಿಕೆ: ಈ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ಮೂರು ತಿಂಗಳೊಳಗೆ, ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರು, ವಿವಿಧ ವೃಂದಗಳಲ್ಲಿನ ಹುದ್ದೆಗಳಿಗೆ ಅನ್ವಯವಾಗುವ ಕರ್ತವ್ಯಗಳ ಸ್ವರೂಪ, ಸರ್ಕಾರವು ಹೊರಡಿಸಿದ ವಿವಿಧ ಶಾಸನಗಳು, ನಿಯಮಗಳು, ವಿನಿಯಮಗಳು, ಕಾರ್ಯಕಾರಿ ಆದೇಶಗಳು, ಇತ್ಯಾದಿಗಳು ಮತ್ತು ಪ್ರತಿಯೊಂದು ವೃಂದದಲ್ಲಿನ ಹುದ್ದೆಗಳಿಗೆ ಅನ್ವಯಿಸಲಾದ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿರುವ ಕ್ಷೇತ್ರ ಜ್ಞಾನವನ್ನು ಗಮನದಲ್ಲಿಟ್ಟುಕೊಂಡು, ಅಧಿಸೂಚನೆಯ ಮೂಲಕ, ಅಂತಹ ಪ್ರತಿಯೊಂದು ಗ್ರೂಪ್-ಎ, ಬಿ ಮತ್ತು ಸಿ. ವೃಂದಕ್ಕೂ ಕ್ರಮವಾಗಿ ತರಬೇತಿ ಕೋರ್ಸ್‌ಗಳನ್ನು ನಿಗದಿಪಡಿಸತಕ್ಕದ್ದು. ಈ ಉದ್ದೇಶಕ್ಕಾಗಿ, ಇಲಾಖೆಯ ಮುಖ್ಯಸ್ಥರು ಅಗತ್ಯವೆಂದು ಭಾವಿಸುವ ವ್ಯಕ್ತಿಗಳನ್ನು ಒಳಗೊಂಡ ಸಲಹಾ ಸಮಿತಿಗಳನ್ನು ರಚಿಸಬಹುದು ಮತ್ತು ತರಬೇತಿಗಾಗಿ ಕೋರ್ಸ್‌ಗಳ ಪಟ್ಟಿಯನ್ನು ರೂಪಿಸತಕ್ಕದ್ದು. ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಲು ಮತ್ತು ಆ ಇಲಾಖೆಗೆ ನಿರ್ದಿಷ್ಟವಾದ ಕ್ಷೇತ್ರಗಳಿಗೆ ಆನ್‌ಲೈನ್ ತರಬೇತಿ ಕೋರ್ಸ್ ಗಳನ್ನು ರಚಿಸಲು ಮತ್ತು ಅಗತ್ಯವಿರುವಂತೆ ಆಫ್‌ಲೈನ್ ತರಬೇತಿಯನ್ನು ನಡೆಸಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಲು ಇಲಾಖೆಗಳ ಮುಖ್ಯಸ್ಥರು ಜವಾಬ್ದಾರರಾಗಿರುತ್ತಾರೆ. ಬಡ್ತಿಯ ಹಿಂದಿನ ವರ್ಷದಲ್ಲಿ ಅಧಿಸೂಚನೆಯಂತೆ ಕನಿಷ್ಠ ಹತ್ತು ದಿನಗಳ ಆಫ್‌ಲೈನ್ ತರಬೇತಿಯನ್ನು ಪಡೆದಿಲ್ಲದಿದ್ದರೆ, ಯಾವುದೇ ಸರ್ಕಾರಿ ಉದ್ಯೋಗಿ ಮುಂದಿನ ವೃಂದಕ್ಕೆ ಬಡ್ತಿ ಪಡೆಯಲು ಅರ್ಹನಾಗತಕ್ಕದ್ದಲ್ಲ.

5. ಆನ್‌ಲೈನ್ ತರಬೇತಿ. ಆಫ್‌ಲೈನ್ ತರಬೇತಿಯೊಂದಿಗೆ, ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿಯು ಅಧಿಸೂಚಿತ ಆನ್‌ಲೈನ್ ತರಬೇತಿ ಕೋರ್ಸ್‌ಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ ಸುಧಾರಣೆ) ಸೂಚಿಸಿದಂತೆ ಆನ್‌ಲೈನ್ ಕಲಿಕಾ ವೇದಿಕೆಯಲ್ಲಿ ಪ್ರತಿ ವರ್ಷ ಕನಿಷ್ಠ ಸಂಖ್ಯೆಯ ಅಂಕಗಳನ್ನು ಗಳಿಸಬೇಕು.

6. ತರಬೇತಿಯ ಆದ್ಯತೆ. ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿಯು ನಿಯಮ 4 ಮತ್ತು ನಿಯಮ 5ರ ಪ್ರಕಾರ ತರಬೇತಿ ಪಡೆಯಬೇಕಾದ ಸಂಸ್ಥೆಗೆ Integrated Government Online Training (IGOT) ವೇದಿಕೆಯ ಮೂಲಕ ಖುದು (in person) ತರಬೇತಿಗಾಗಿ ಅರ್ಜಿ ಸಲ್ಲಿಸಬೇಕು. ಸಂಬಂಧಪಟ್ಟ ಸರ್ಕಾರಿ ನೌಕರರು ನಿಯಮ 4ರಲ್ಲಿ ಸೂಚಿಸಿದಂತೆ ಆಫ್‌ಲೈನ್ ತರಬೇತಿಗಾಗಿ ಅರ್ಜಿ ಸಲ್ಲಿಸಿದ್ದರೆ, ಅವರನ್ನು ಅವರ ವೃಂದದ ಜೇಷ್ಯತೆಯ ಕ್ರಮದಲ್ಲಿ ತರಬೇತಿಗಾಗಿ ಕಳುಹಿಸತಕ್ಕದ್ದು.


logoblog

Thanks for reading Karnataka State Civil Services (Mandatory Training for Promotion) Rules, 2025.

Newest
You are reading the newest post

No comments:

Post a Comment