Indian History: ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಕ್ರಾಂತಿಕಾರಿಗಳು
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎರಡು ವಿಭಿನ್ನವಾದ ಮಾರ್ಗಗಳನ್ನನುಸರಿಸುವ ಗುಂಪುಗಳನ್ನು ಕಾಣಬಹುದು. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ದೊರಕಿಸಲು ಬ್ರಿಟಿಷರನ್ನು ಶಸ್ತ್ರಾಸ್ತ್ರ ಬಂಡಾಯದಿಂದ ಕಿತ್ತೊಗೆಯಬೇಕೆಂದು ಕ್ರಾಂತಿಕಾರರು ಕಾರ್ಯವೆಸಗಿದರೆ, ಬ್ರಿಟಿಷರ ಒಲವನ್ನು ಗಳಿಸಿ, ಸತ್ಯ, ಅಹಿಂಸೆಗಳ ಆಧಾರದ ಮೇಲೆ ಸತ್ಯಾಗ್ರಹ ನಡೆಸಿ ಸ್ವಾತಂತ್ರ್ಯಗಳಿಸ ಬೇಕೆನ್ನುವ ಕಾಂಗ್ರೆಸ್ ಗುಂಪು ಒಂದು ಕಡೆ, ಕಾಂಗ್ರೆಸ್ಸಿನವರ ಮನನಿ, ಸಮಾಲೋಚನೆ, ಶಾಂತಿಯುತ ಕಾನೂನುಭಂಗ ಚಳುವಳಿ ಮುಂತಾದ ಕ್ರಮಗಳು ಕ್ರಾಂತಿಕಾರರಿಗೆ ಒಪ್ಪಿಗೆಯಾಗಲಿಲ್ಲ ಬಲದ ಆಧಾರದ ಮೇಲೆ ರಚನೆಯಾಗಿ ಮುಂದುವರಿಯುತ್ತಿರುವ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಸಶಸ್ಯ ಬಲದಿಂದಲೇ ಅಳಿಸಬೇಕೆಂದು ಕಾರ್ಯ ಪ್ರವೃತ್ತರಾದರು. ಕ್ರಾಂತಿಕಾರಿಗಳು ಸ್ವಾಮಿ ವಿವೇಕಾನಂದರ ವೀರೋತ ನುಡಿಗಳು, ಬಂಕಿಮಚಂದ್ರರ 'ಆನಂದ ಮಠ' ಮುಂತಾದ ಬಂಗಾಳಿ ಸ್ಥಳೀಯ ಭಾಷೆಯ ರಾಷ್ಟ್ರೀಯ ಸಾಹಿತ್ಯದಿಂದ ಪ್ರಭಾವಿತರಾಗಿ ದೇಶಭಕ್ತಿ ಮತ್ತು ತ್ಯಾಗ ಮನೋಭಾವನೆಯನ್ನು ಬೆಳೆಸಿಕೊಂಡರು. ಇವರು ತಮ್ಮ ಕಾರ್ಯಾಚರಣೆಯಲ್ಲಿ ಅನುಸರಿಸುತ್ತಿದ್ದ ಮುಖ್ಯ ವಿಧಾನಗಳೆಂದರೆ ಗುಪ್ತ ಸಂಘಟನೆಗಳನ್ನು ಸ್ಥಾಪಿ ಕ್ರಾಂತಿಕಾರಿಗಳನ್ನು ಸಂಘಟಿಸುವುದು, ಶಸ್ತ್ರ ಬಳಕೆ ಮತ್ತು ಸೈನಿಕ ಶಿಕ್ಷಣ ನೀಡಿ ಸಶಸ್ತ್ರ ಬಂಡಾಯವನ್ನು ಕೈಗೊಳ್ಳುವುದು, ಪ್ರಮುಖ ಬ್ರಿಟಿಷ್ ರಾಜಕಾರಣಿಗಳು, ಅಧಿಕಾರಿಗಳನ್ನು ಕೊಲ್ಲುವುದು, ಈ ಎಲ್ಲ ಚಟುವಟಿಕೆಗಳಿಗೆ ಅವಶ್ಯಕವಾದ ಹಣವನ್ನು ಡಕಾಯಿತಿಯ ಮೂಲಕ ಸಂಗ್ರಹಿಸುವುದು. ಈ ಕ್ರಾಂತಿಕಾರರು ಬ್ರಿಟಿಷ್ ಭಾರತದ ಎಲ್ಲ ಪ್ರಾಂತ್ಯಗಳಲ್ಲೂ ಗುಪ್ತ ಕೇಂದ್ರಗಳನ್ನು ಸ್ಥಾಪಿಸಿಕೊಂಡು ರಹಸ್ಯವಾಗಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇವರ ಚಟುವಟಿಕೆಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಅಮೇರಿಕಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನ, ಜಪಾನ್ ಮುಂತಾದ ವಿದೇಶಗಳಲ್ಲಿ ಗುಪ್ತ ಕೇಂದ್ರಗಳನ್ನು ಹೊಂದಿದ್ದರು.
ಭಾರತೀಯ ಪತ್ರಿಕೆಗಳು ಭಾರತದ ಚಳುವಳಿಯಲ್ಲಿನ ಬ್ರಿಟಿಷ್ ಧಮನಕಾರಿ ನೀತಿಯನ್ನು ಜನರಿಗೆ ಮನಮುಟ್ಟುವಂತೆ ವಿವರಿಸಿದವು. ಯೂರೋಪಿನ ಯುದ್ಧಕ್ಕೆ ಕಾರಣವಾದ ಆಸ್ಟ್ರಿಯ-ಹಂಗೇರಿ ರಾಜಕುಮಾರನ ಕೊಲೆಗಾರನು ಈ ರೀತಿಯಲ್ಲಿ ಕ್ರಾಂತಿಕಾರಿಗಳಿಗೆ ಘೋಷಿಸಿದನು, "ಅರಾಜಕತೆ ದೀರ್ಘಾಯುವಾಗಲಿ ನನ್ನಂತಹ 200 ಜನ ಧೈರ್ಯಶಾಲಿಗಳು ಮನಸ್ಸು ಮಾಡಿದರೆ ಪ್ರಪಂಚದ ಎಲ್ಲ ರಾಜ ಸಿಂಹಾಸನಗಳು ಖಾಲಿಯಾಗುತ್ತವೆ. ಇಂತಹ ಅನೇಕ ಕೊಲೆಗಳು ಈ ಅವಧಿಯಲ್ಲೇ ನಡೆದಿದ್ದರಿಂದ ಭಾರತದ ಕ್ರಾಂತಿಕಾರಿಗಳು ಅದೇ ದಾರಿಯಲ್ಲಿ ಸಾಗಿದರು. ಕ್ರಾಂತಿಕಾರಿಗಳ ಚಟುವಟಿಕೆ ಮೊದಲು ಮಹಾರಾಷ್ಟ್ರದಲ್ಲಿ ಪ್ರಾರಂಭವಾಗಿ ನಂತರ ಬಂಗಾಳದಲ್ಲಿ ಪ್ರಬಲವಾಗಿ ಬೆಳೆಯಿತು. ಭಾರತದ ಮೊದಲ ಕ್ರಾಂತಿಕಾರಿಯೆಂದರೆ ವಾಸುದೇವ ಬಲವಂತ ಫಡಕೆ. ಇವನು ಪುಣೆಯ ಮಿಲಿಟರಿ ವಿಭಾಗದಲ್ಲಿ ನೌಕರನಾಗಿದ್ದು ಅಲ್ಲಿಯ ಸಾರ್ವಜನಿಕ ಸಭಾದ ಸಂಬಂಧ ಹೊಂದಿದ್ದು ಕಾಮದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೆಂದು ಬ್ರಿಟಿಷರ ವಿರುದ್ಧ ಆದಿವಾಸಿಗಳು ಮತ್ತು ಕೆಲವು ಕ್ರಾಂತಿಕಾರರನ್ನು 1879ರ ಅವಧಿಯಲ್ಲಿ ಸಂಘಟಿಸಿದನು. 1879ರ ಮೇವರೆಗೆ ನೌಕರಿಯಲ್ಲೇ ಇದ್ದು ಅಲ್ಲಿಂದ ನಕ್ಷೆಗಳು, ಮಿಲಿಟು ವಿಚಾರಗಳನ್ನು ತಿಳಿದು ನಂತರ ಇಂಗ್ಲಿಷ್ ಅಧಿಕಾರಿಗಳು ಕ್ರಾಮದ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಶಿಕ್ಷಿಸುವುದಾಗಿ ಎಚ್ಚರಿಕೆ ನೀಡಿದ, ಬೆಚ್ಚಿದ ಸರ್ಕಾರ 300 ಸೈನಿಕರನ್ನು ಫಡಕೆ ಹಿಡಿಯಲು ಕಳುಹಿಸಿತು. ಫಢಕೆಯವರ ಅನುಯಾಯಿಗಳಾದ ರಾಮೋಶಿ ಜನಾಂಗವು ಹೋರಾಡಿದರೂ ವಿಫಲವಾಗಿ 1879ರ ಜುಲೈ 20 ರಂದು ಭಡಣೆ ಸೆರೆಯಾದರು. ಕೊನೆಗೆ ಏಡನ್‌ನ ಸೆರೆಯಲ್ಲೇ 1883ರಲ್ಲಿ ನಿಧನರಾದರು.
ವಿ.ಡಿ. ಸಾವರ್ಕ‌್ರರವರು 1904ರಲ್ಲಿ 'ಅಬಿನವ ಭಾರತ" ಎಂಬ ಗುಪ್ತ ಸಂಘವನ್ನು ಸ್ಥಾಪಿಸಿದರು. ಸಾವರ್ಕರ ತಮ್ಮ ಗಣೇಶ್ ದಾಮೋಧರ ಸಾವರ್ಕರ್ ನಾಸಿಕ್ ಸಂಘದ ಮುಖ್ಯಸ್ಥನಾಗಿ 2,000 ಮ್ಯಾಜಿನಿಯ ಜೀವನ ಕತೆಯ ಪುಸ್ತಕಗಳನ್ನು ಮರಾಠಿಯಲ್ಲಿ ಮುದ್ರಿಸಿ ಬಿಡುಗಡೆ ಮಾಡಿದರು. 1909ರಲ್ಲಿ ಒಂದು ಕರಪತ್ರದಲ್ಲಿ 'ಕತ್ತಿ ಹಿಡಿದು ಸರ್ಕಾರವನ್ನು ನಾಶಮಾಡಿ ಏಕೆಂದರೆ ಈ ಸರ್ಕಾರ ವಿದೇಶಿ ಮತ್ತು ಆಕ್ರಮಣವಾದುದು ಎಂದು ಮುದ್ರಿಸಲಾಗಿತ್ತು. ಇವರನ್ನು ಸೆರೆಹಿಡಿದು ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶ ಚಾಕ್ಸ್‌ನ್‌ನನ್ನು ವಿ.ಡಿ. ಸಾವರ್ಕರ್ ಕಳುಹಿಸಿದ ಪಿಸ್ತೂಲ್ ನಿಂದ 1909ರ ಡಿಸೆಂಬರ್ನಲ್ಲಿ ಕೊಲೆಮಾಡಲಾಯಿತು.
ವುಣೆಯಲ್ಲಿ ಹರಡಿದ ಪ್ಲೇಗು ಕಾಯಿಲೆಯನ್ನು ಹತೋಟಿ ಮಾಡಲು ಅಧಿಕಾರಿಯಾಗಿದ್ದ ಬ್ಯಾಂಡ್ ರೋಗ ಹತೋಟಿಗಾಗಿ ಪೋಲೀಸರನ್ನು ಬಳಸಿ ದೇವರ ಮನೆ, ಅಡಿಗೆ ಮನೆಗೆಲ್ಲ ನುಗ್ಗಿ ಶೋಧಿಸಿದನು. ಇವುಗಳನ್ನು ಪ್ರತಿಭಟಿಸಿ ವರದಿ ಮಾಡಿದ ಬಲವಂತರಾವ್ ಮತ್ತು ಹರಿಪಂಥ ರಾಮಚಂದ್ರ ಎಂಬ ನಾಟು ಸಹೋದರರನ್ನು ಗಡಿಪಾರು ಮಾಡಲಾಯಿತು. 1898ರ ಜೂನ್ 27ರಂದು ಬ್ಯಾಂಡ್‌ನನ್ನು ಛಾಪೇಕರ್ ಸಹೋದರರು ಕೊಂದರು. ಇವರು "ಹಿಂದೂ ಧರ್ಮ ಸಂಘದ" ಕಾರ್ಯಕರ್ತರಾಗಿ ವಿಕ್ಟೋರಿಯಾ ರಾಣಿಯ ಪ್ರತಿಮೆಯ ಕೊರಳಿಗೆ ಚಪ್ಪಲಿಯ ಹಾರ ಹಾಕುವಂತಹ ಕಾರ್ಯಮಾಡುತ್ತಿದ್ದರು. ಇವರಿಗೆ ಮರಣದಂಡನೆ ವಿಧಿಸಲಾಯಿತು.
ಬೊಂಬಾಯಿ ಪ್ರಾಂತ್ಯದ ಕ್ರಾಂತಿಕಾರಿ ಚಟುವಟಿಕೆಗಳನ್ನು ನಾಸಿಕ್‌ನಲ್ಲಿ ಸ್ಥಾಪನೆಯಾಗಿದ್ದ "ಅಭಿನವ ಭಾರತ ಸಂಘ” ವ್ಯವಸ್ಥೆಗೊಳಿಸಿತ್ತು. ಕ್ರಮ ಕಾಲದಲ್ಲಿ ಕ್ರೌರ್ಯತೆಯನ್ನು ಪ್ರದರ್ಶಿಸಿದ್ದ ಬ್ಯಾಂಡ್‌ನನ್ನು ಶ್ಯಾಮ್‌ಜಿ ಕೃಷ್ಣವರ್ಮ ಎಂಬ ಅಭಿನವ ಭಾರತ ಸಂಘದ ಕ್ರಾಂತಿಕಾರಿಯು 1899ರಲ್ಲಿ ಕೊಲೆ ಮಾಡಿ ಪೊಲೀಸರ ಕೈಗೆ ಸಿಕ್ಕದೆ ತಪ್ಪಿಸಿಕೊಂಡು ಲಂಡನ್‌ಗೆ ಹೋಗಿ ಅಲ್ಲಿ ಅಜ್ಞಾತವಾಸದಲ್ಲಿದ್ದು ಕೊಂಡು ಭಾರತದ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ಸಹಾಯಮಾಡುತ್ತಿದ್ದನು.
ಬಂಗಾಳದ ವಿಭಜನೆಯ ನಂತರ ಸರ್ಕಾರವು ಉದ್ಯೋಗದ ಜಾಹಿರಾತಿನಲ್ಲಿ ಬಂಗಾಳಿ ಬಾಬುಗಳು ಅರ್ಜಿ ಹಾಕುವಂತಿಲ್ಲವೆಂದು ಪ್ರಚರಿಸುತ್ತ ಉದ್ಯೋಗಗಳಿಂದ ದೂರವಿಟ್ಟಿದ್ದು ನಿರುದ್ಯೋಗಿ ಯುವಕರಲ್ಲಿ ಕ್ರಾಂತಿಕಾರಿ ಮನೋಭಾವ ಬೆಳೆಯಲು ಕಾರಣವಾಯಿತು. ಬಂಗಾಳದ ವಿಭಜನೆಯ ನಂತರ ಪ್ರಾರಂಭವಾದ ಸ್ವದೇಶಿ ಚಳವಳಿಯ ಸಂದರ್ಭದಲ್ಲಿ ಭಾರತೀಯರಿಗೆ ರಾಜಕೀಯ ಮತ್ತು ರಾಷ್ಟ್ರೀಯ ಚಿಂತನೆ ಬೆಳೆಯಲಾರಂಭಿಸಿತು. ಸ್ವದೇಶಿ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸಿದರೂ ತಮ್ಮ ಗುರಿಯನ್ನು ಸಾಧಿಸಲಾಗದೆ ಅತೃಪ್ತರಾದ ಯುವಕರು ಕ್ರಾಂತಿ ಮಾರ್ಗವನ್ನಿಡಿದರು. ಬಂಗಾಳದ ಪ್ರಪ್ರಥಮ ಕ್ರಾಂತಿಕಾರಿ ಸಂಘಟನೆಯೆಂದರೆ 'ಅನುಸೀಲನ ಸಮಿತಿ". ಇದು ಅರವಿಂದ ಘೋಷರ ಸಹೋದರ ಬರೀಂದ್ರ ಕುಮಾರ್ ಘೋಷ್‌ರವರ ನೇತೃತ್ವದಲ್ಲಿ ಬಂಗಾಳದ ವಿವಿಧ ಪ್ರಾಂತ್ಯಗಳಲ್ಲಿ ಶಾಖೆಗಳನ್ನು ಹೊಂದಿದ್ದು ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿತ್ತು. 1905ರಲ್ಲಿ “ಬವಾನಿ ಮಂದಿರ್ ಎಂಬ ಪುಸ್ತಕವನ್ನು ಪ್ರಕಟಿಸಿ ಅದರಲ್ಲಿ ಪವಿತ್ರ ತಾಣವೊಂದನ್ನು ಸ್ಥಾಪಿಸಿ ಅಲ್ಲಿಂದ ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸುವ ಒಂದು ದೀರ್ಘ ಯೋಜನೆಯನ್ನು ತಿಳಿಸಲಾಗಿತ್ತು. ಎರಡು ವರ್ಷಗಳನಂತರ "ವರ್ತಮಾನ್ ರಣನೀತಿ" ಎಂಬ ಪುಸ್ತಕವನ್ನು ಪ್ರಕಟಿಸಿ ಅದರಲ್ಲಿ ಆಧುನಿಕ ಸೈನಿಕ ತರಬೇತಿ, ಗೆರಿಲ್ಲಾ ಯುದ್ಧಗಳ ಬಗ್ಗೆ ದೀರ್ಘವಾಗಿ ಪ್ರಸ್ತಾಪಿಸಿ ಎಲ್ಲರೂ ತರಬೇತಿ ಪಡೆಯಬೇಕೆಂದು ತಿಳಿಸಿತು. ಅನುಸೀಲನ ಸಮಿತಿಯು "ಯುಗಾಂತರ್" ಎಂಬ ಪತ್ರಿಕೆಯನ್ನು ಹೊರತಂದು ಬಹಿರಂಗವಾಗಿ ಜನರು ಸಶಸ್ತ್ರ ಬಂಡಾಯ ಹೂಡಬೇಕೆಂದು ತಿಳಿಸಿತು. 1906ರಲ್ಲಿ ಯುಗಾಂತರ್ ಸ್ಥಾಪನೆಯಾದಾಗಲೇ 7000 ಪ್ರತಿಗಳು ಹಂಚಲ್ಪಡುತ್ತಿದ್ದವು. ಸರ್ಕಾರವು 1908ರಲ್ಲಿ ಹೊಸ ಪತ್ರಿಕಾ ಕಾಯ್ದೆಯನ್ನು ಜಾರಿಗೆ ತಂದು ಈ ಪತ್ರಿಕೆಯನ್ನು ಧಮನ ಮಾಡಿತು. ಇದರ ಮೇಲೆ ಕ್ರಮ ಕೈಗೊಂಡ ನ್ಯಾಯಾದೀಶರು ಅಭಿಪ್ರಾಯ ಪಟ್ಟಿರುವಂತೆ “ಯುಗಾಂತರ್ ಒಂದೊಂದು ಸಾಲಿನಲ್ಲೂ ಬ್ರಿಟಿಷ್ ಜನಾಂಗದ ಮೇಲೆ ದ್ವೇಷವನ್ನು ಸೂಚಿಸುತ್ತದ ಮತ್ತು ಕ್ರಾಂತಿಯು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಜನರಿಗೆ ತಿಳಿಸಲು ಪ್ರಯತ್ನಿಸಿದೆ' ಎಂದಿದ್ದಾರೆ.
ಬರೀಂದ್ರಕುಮಾರ್ ಘೋಷ್ ರವರು ತಮ್ಮ ಪತ್ರಿಕೆಗಳಲ್ಲಿ ಬೋಧಿಸುತ್ತಿದ್ದುದನ್ನು ಕಾರ್ಯರೂಪಕ್ಕೆ ತರಲು ಇಬ್ಬರು ಕಾರ್ಯಕರ್ತರನ್ನು ವಿದೇಶಕ್ಕೆ ಕಳುಹಿಸಿ ಬಾಂಬನ್ನು ತಯಾರಿಸುವ ತಾಂತ್ರಿಕತೆಯನ್ನು ಪಡೆಯಲು ಕಳುಹಿಸಿದರು. ಅವರಿಬ್ಬರು ತಂದ ಬಾಂಬಿನ ತಾಂತ್ರಿಕತೆಯನ್ನು ಕೋಟದ ಮನೆಯನ್ನು ಕೇಂದ್ರವಾಗಿಸಿಕೊಳ್ಳಲಾಯಿತು. ಸಿದ್ದಗೊಂಡ ಬಾಂಬುಗಳಿಂದ ಬಂಗಾಳದ ಗವರ್ನ‌್ರಗಳನ್ನು ಉಪಯೋಗಿಸಿಕೊಂಡು ಸಾಕ್ ತಯಾರಿಸಲು ಕಲ್ಕತದ ಹೊರ ವಲಯದ ಮಣಿ ತಲದ ಮುರಾರಿಪುಕುರ್ ಕೊಲ್ಲಲು ಪ್ರಯತ್ನಿಸಿ ವಿಫಲರಾದರು. ಬಂಗಾಳದ ಸ್ವದೇಶಿ ಚಳುವಳಿಯ ಕಾಲದಲ್ಲಿ ಕಲ್ಕತ್ತಾದ ಮ್ಯಾನಾದ ಕಿಂಗ್ಸ್ ಫರ್ಡ್ ಆಪಾದಿತರನ್ನು ಕ್ರೂರವಾಗಿ ಶಿಕ್ಷಿಸುತ್ತಿದ್ದ, ಮತ್ತು ಬಾಲಕರ ಮೇಲೆ ಬೆತ್ತ ಪ್ರಯೋಗ ಮಾಡುತ್ತಿರು ಕ್ರಾಂತಿಕಾರಿಗಳನ್ನು ಕೆರಳಿಸಿತು. ಆದರೆ ಸರ್ಕಾರ ಅವರನ್ನು ಜೀವಕ್ಕೆ ಅಪಾಯವಿದೆಯೆಂದು ಮುನಾಪಲ್ ಸರಕ್ಕೆ ವರ್ಗಾಯಿಸಿತು. ಆದರೂ ಅವನನ್ನು ಕೊಲ್ಲಲು ಪ್ರಫುಲ್ಲ ಚಾಕಿ ಮತ್ತು ಖುದಿರಾಂ ಬೋಸ್ ರನ್ನು ನೇಮಿಸಲಾಯಿತು ಇವರಿಬ್ಬರೂ ಕಿಂಗ್ಸ್ ಪೋಡ್ ಬರುತ್ತಿದ್ದ ದಾರಿಯಲ್ಲಿ ಕಾದಿದ್ದು ಅವನು ಹೋಗುವ ಗಾಡಿಗೆ ಬಾರದ ಚೆಲ್ಲು ಕೊಲ್ಲುವ ಹವಣಿಕೆಯಲ್ಲಿದ್ದರು. 1908 ಏಪ್ರಿಲ್ 30 ರಂದು ಕಿಂಗ್ಸ್ ಪೋರ್ಡ್ನ ಪ್ರಯೋಣಿಸುತ್ತಿರುವ ಗಡಿ ಎಂದು ತಿಳಿದು ಬಾಂಬ್ ಎಸೆದರು. ಆದರೆ ಆ ಗಾಡಿಯು ಕಿಂಗ್ಸ್ ಪೋರ್ಡ್ದಾಗಿರದೆ ಕೆನಡಿಯೆಂಬುವುವರ್ಸಾನ್ನು ಬಾಂಬ್ ಸ್ಫೋಟದಲ್ಲಿ ಕೆನಡಿಯವರ ಹೆಂಡತಿ ಮತ್ತು ಮಗಳು ಕೊಲ್ಲಲ್ಪಟ್ಟರು. ಬಾಂಬ್ ಎಸೆದು ಕಪ್ಪಿಕೊಳ್ಳು ಗುಂಡಾರಿಸಿಕೊಂಡು ಸತ್ತನು. ಖುದಿರಾಮ್ ಬೋಸ್ ತಪ್ಪಿಸಿಕೊಳ್ಳಲು ಮಾರನೇ ದಿನ ಮೈನಿ ರೈಲು ನಿಲ್ದಾಣದಲ್ಲಿ ಪ್ರಯತ್ನ ಪಟ್ಟ, ಪ್ರಪುಲ್ಲ ಚಾಕಿಯನ್ನು ಮಾರನೆಯ ದಿನ ಪೊಲೀಸರು ಸೆರೆ ಹಿಡಿಯಲು ಪ್ರಯತ್ನ ಪಟ್ಟಾಗ ಹಾ ಕಾಯುತ್ತಾ ಪತ್ರಿಕೆಯನ್ನು ನೋಡಿ "ಕಿಂಗ್ಸ್ ಪೋರ್ಡ್ ಸಾಯಲಿಲ್ಲವೆ" ಎಂದು ಮೈಮರೆತು ಉದ್ಘರಿಸಿದಾಗ ಅನುಮಾನಗೊಂಡ ಜನರು ಅವನನ್ನು ಪೊಲೀಸರಿಗೆ ಹಿಡಿದುಕೊಟ್ಟರು. ಖುದಿರಾಮ್ ಬಾಂಬೆಸೆದ ಹೊಣೆಯನ್ನು ತಾನೊಬ್ಬನೆ ಒಪ್ಪಿಕೊಂಡು ತನ್ನ ಸಂಘಟನೆ ಅಥವಾ ತನ್ನ ಸ್ನೇಹಿತರ ಹೆಸರನ್ನು ಬಯಲು ಮಾಡದೆ 180 ಆಗಸ್ಟ್ 11 ರಂದು ನಗುನಗುತ್ತಲೇ ನೇಣುಗಂಭವನ್ನೇರಿದ. ಖುದಿರಾಂ ಕ್ರಾಂತಿಕಾರಿ ಹೋರಾಟದ ಮೊದಲನೆಯ ಹುತಾತ್ಮನೆಂಬ ಸ್ಥಾನವನ್ನು ಪಡೆದಿದ್ದಾನೆ.
ಬಾಂಬ್ ಸ್ಪೋಟನೆಯ ಎರಡು ದಿನಗಳ ನಂತರ ಮುರಾರಿಪಕುರ್ ತೋಟದ ಮನೆಯ ಮೇಲೆ ಬ್ರಿಟಿಷರ ದಾಳಿ ಮಾಡಿ ಬಾಂಬ್, ಸ್ಪೋಟಕಗಳು ಮುಂತಾದುವನ್ನು ವಶಪಡಿಸಿಕೊಂಡರು. ಅರವಿಂದಪೋಸ್, ಬರೀಂದ್ರಕುಮಾರ್ ಘೋಷ್‌ರನ್ನೊಳಗೊಂಡಂತೆ 34 ಜನರ ಮೇಲೆ ಮೊಕದ್ದಮೆ ಹೂಡಲಾಯಿತು. ಈ ಮೊಕದ್ದಮೆ ಅಲಿಪುರದಲ್ಲಿ ನಡೆಯುತ್ತಿದ್ದಾಗಲೇ ಈ ಮೊಕದ್ದಮೆಯ ಸಂಬಂಧ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ವಾ ಮತ್ತು ಪೊಲೀಸ್ ಅಧಿಕಾರಿಯನ್ನು ಕೋರ್ಟ್ ಆವರಣದಲ್ಲೇ ಕೊಲೆ ಮಾಡಲಾಯಿತು. ಈ ಮೊಕದ್ದಮೆಯಲ್ಲಿ 15 ಜನರನ್ನು ತಪ್ಪಿತಸ್ಥರೆಂದು ಗುರುತಿಸಿ ಬರೀಂದ್ರಕುಮಾರ್ ಮುಂತಾದವರನ್ನು ಗಡಿಪಾರುಮ ಅರವಿಂದಘೋಷ್‌ರನ್ನು ಬಿಡುಗಡೆ ಮಾಡಿದರು. ಹೀಗೆ ಅಲಿಪುರ ಪಿತೂರಿ ಮೊಕದ್ದಮೆಯಲ್ಲಿ ಕ್ರಾಂತಿಕಾರಿಗಳ ಬಾಂಬ್ ತಯಾರಿಕೆ ಅಂಶವು ದೇಶದಾದ್ಯಂತ ಜನರಲ್ಲಿ ವಿದ್ಯುತ್ ಪ್ರವಹಿಸಿದಂತಾಯಿತು. ಅಲಿಪುರದ ಕ್ರಾಂತಿಕಾರಿಗಳ ಧೈರ್ಯ, ಬಲಿದಾನಗಳು ಯುವ ಜನತೆಯನ್ನು ಕ್ರಾಂತಿಕಾರ ಮಾರ್ಗಕ್ಕೆ ಹೆಚ್ಚೆಚ್ಚು ಸೆಳೆದವೆಂದು ಹೇಳಬಹುದು
ಬಂಗಾಳದಲ್ಲಿ ಜ್ಯೋತೀಂದ್ರನಾಥರ ನೇತೃತ್ವದಲ್ಲಿ 'ಸಂಜೀವಿನಿ ಸಭಾ" ಎಂಬ ಸಂಘ ಸ್ಥಾಪಿಸಿಕೊಂಡರು. ಇದರಲ್ಲಿ ಮುಖ್ಯ ನಿಯಮವೆಂದರೆ "ಮಂತ್ರಗುಪ್ತಿ" ಅಂದರೆ ಸಂಘದಲ್ಲಿ ಆಡಿದ, ಕೇಳಿದ ಮಾತು, ಕೈಗೊಂಡ ತೀರ್ಮಾನಗಳನ್ನು ಹೊರಗೆ ಪ್ರಸ್ತಾಪಿಸಬಾರದೆಂಬುದಾಗಿತ್ತು. ಈ ಸಂಘವು ಸಭೆಯಲ್ಲಿ ತಲೆಬುರುಡೆಯಿಟ್ಟು ಅದರ ಕಣ್ಣಿನ ರಂಧ್ರಗಳಲ್ಲಿ ಮೇಣದ ಬತ್ತಿ ಬೆಳಗಿಸುತ್ತಿದ್ದರು. ಈ ತಲೆಬುರುಡೆ ಮೃತ ಭಾರತವನ್ನು, ದೀಪಗಳು ಮೃತ ಭಾರತದಲ್ಲಿನ ಜೀವನಶಕ್ತಿಯ ಬೆಳಕನ್ನು ಪ್ರತಿನಿಧಿಸುತ್ತಿದ್ದವು. ಈ ಸಂಘವು ಗುಪ್ತ ಭಾಷೆಯನ್ನು ಬಳಸುತ್ತಿತ್ತು. ಗುಪ್ತ ಭಾಷೆಯಲ್ಲಿ 'ಹಮ್ ಚುಪಾ ಮೂ ಹಾಪ್' ಎಂದರೆ ಸಂಜೀವಿನಿ ಸಭಾ ಎಂದರ್ಥ. ಪಂಜಾಬ್‌ನು ಸರ್ದಾರ್ ಅಜಿತ್‌ಸಿಂಗ್ "ಭಾರತ್ ಮಾತಾ ಸೊಸೈಟಿ" ಎಂಬ ಕ್ರಾಂತಿಕಾರಿ ಸಂಘವನ್ನು ಲಾಹೋರನಲ್ಲಿ ಪ್ರಾರಂಭಿಸಿದರು. ಇವರು ರೈತರಿಗೆ ಸ್ವಾಭಿಮಾನವನ್ನು ಬೆಳೆಸಿಕೊಳ್ಳಲು ಕರೆನೀಡಿದರು.
1912ರ ಡಿಸೆಂಬರ್ 23ರಂದು ವೈಸರಾಯ್ ಲಾರ್ಡ್ ಹಾರ್ಡಿಂಜ್ ದೆಹಲಿಯಲ್ಲಿ ಆನೆಯಮೇಲೆ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಜನರು ಹೂವು ಮತ್ತು ತೆಂಗಿನ ಕಾಯಿಗಳನ್ನು ಎಸೆಯುತ್ತಿದ್ದರು. ಜಾಯಾ ಚೌಕ ಪ್ರದೇಶದಲ್ಲಿ ವೈಸರಾಯ್ ಮೇಲೆ ಬಾಂಬ್ ಎಸೆಯಲಾಯಿತು. ಬಾಂಬ್ ಎಸೆದವರು ರಾಸ್ ಬಿಹಾರಿ ಬೋಸ್,ಈ ಗಲಭೆಯಲ್ಲಿ ತಪ್ಪಿಸಿಕೊಂಡರು. ಸರ್ಕಾರ ಇವರನ್ನು ಹಿಡಿದು ಕೊಟ್ಟವರಿಗೆ 7,500 ರೂ ಬಹುಮಾನ ಘೋಷಿಸಿತು ರಾಸ್ ಬಿಹಾರಿ ಬೋಸ್ ಸುಳ್ಳು ಹೆಸರಿನಿಂದ ಜಪಾನ್‌ಗೆ ತಪ್ಪಿಸಿಕೊಂಡು ಹೋಗಿ ಮುಂದೆ ಸುಭಾಸ್ ಚಂದ್ರ ಬೋಸರ ಭಾರತ ರಾಷ್ಟ್ರೀಯ ಸೈನ್ಯದಲ್ಲಿ ಪ್ರಮುಖರಾಗಿ ದುಡಿದು 1945ರಲ್ಲಿ ನಿಧನರಾದರು. ಈ ಮೊಕದ್ದಮೆಯಲ್ಲಿ 13 ಜನರನ್ನು ಸೆರೆಹಿಡಿದು ವಸಂತಕುಮಾರ್, ಬಾಲಮುಕುಂದ, ಅವಧಬಿಹಾರಿ, ಅಮೀರ್ ಚಂದರನ್ನು ಮರಣದಂಡನೆಗೆ ಗುರಿಮಾಡಲಾಯಿತು.
ಕ್ರಾಂತಿಕಾರಕ ಚಟುವಟಿಕೆಗಳ ಪ್ರಮುಖ ಸಂಸ್ಥೆಯೆಂದರೆ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್, ಈ ಸಂಸ್ಥೆಯನ್ನು 1924ರಲ್ಲಿ ಕಾನ್ಸುರದಲ್ಲಿ ಸೇರಿದ ಅಖಿಲ ಭಾರತ ಕ್ರಾಂತಿಕಾರಿಗಳು ಒಗ್ಗೂಡಿ ಸ್ಥಾಪಿಸಿದರು. ಇದು ಉತ್ತರ ಪ್ರದೇಶ, ಪಂಜಾಬ್‌ಗಳಲ್ಲಿ ಅನೇಕ ಅಂಗಸಂಸ್ಥೆಗಳನ್ನು ಹೊಂದಿದ್ದು ಸಂಘಟಿತ ಕ್ರಾಂತಿಕಾರಿ ಚಟುವಟಿಕೆಗಳನ್ನು ಕೈಗೊಂಡಿತು. ಈ ಸಂಸ್ಥೆಗೆ ಸೇರಿದ ಪ್ರಮುಖ ಕ್ರಾಂತಿಕಾರಿಗಳೆಂದರೆ ಭಗತ್‌ಸಿಂಗ್, ಚಂದ್ರಶೇಖರ ಅಜಾದ್, ರಾಜಗುರು, ರಾಂಪ್ರಸಾದ್ ಬಿಸ್ಮಿಲ್ಲಾ ಮುಂತಾದವರು. ಈ ಗುಂಪಿನ ಕಾರ್ಯಾಚರಣೆಗಳಲ್ಲಿ ಪ್ರಮುಖವಾದುದು ಕಾಕೋರಿ ರೈಲು ಡಕಾಯಿತಿ. ಇದು ರಾಂ ಪ್ರಸಾದ್ ಬಿಸ್ಮಿಲ್ದಾರ ನೇತೃತ್ವದಲ್ಲಿ ನಡೆಯಿತು. ಈ ಕ್ರಾಂತಿಕಾರಿಗಳು ತಮ್ಮ ಕೆಲಸಗಳಿಗೆ ಅವಶ್ಯಕವಾದ ಹಣವನ್ನು ದೊರಕಿಸಿಕೊಳ್ಳಲು ಡಕಾಯಿತಿಯನ್ನು ಮಾಡುತ್ತಿದ್ದರು. 1925ರ ಆಗಸ್ಟ್ 9ರಂದು ಷಹಜಾನ್‌ಪುರದಿಂದ ಲಕ್ಷ್ಮೀವಿಗೆ ಬರುವ ರೈಲನ್ನು ತಡೆದು ದರೋಡೆ ಮಾಡಿದರು. ಸರ್ಕಾರ ತನಿಖೆ ಮಾಡಿ ರಾಂಪ್ರಸಾದ್ ಬಿಸ್ಮಿಲ್ಲಾ, ಅಷಾಕ್ ಉಲ್ಲಾ, ರಾಜೇಂದ್ರ ಲಾಹಿರಿ, ರೋಷನ್ ಸಿಂಹರನ್ನು ಬಂಧಿಸಿ ಮರಣದಂಡನೆ ವಿಧಿಸಿತು. ಮನ್ಮಥನಾಥ್ ಗುಪ್ತನಿಗೆ 14 ವರ್ಷ ಸೆರೆವಾಸ ವಿಧಿಸಲಾಯಿತು.
1928ರ ಅಕ್ಟೋಬರ್ 20 ರಂದು ಸೈಮನ್ ಕಮಿಷನ್ ಲಾಹೋರ್‌ಗೆ ಭೇಟಿನೀಡಿತು. ಆಗ ಅದರ ವಿರುದ್ಧ ಲಾಲಾಲಜಪತರಾಯರ ನೇತೃತ್ವದಲ್ಲಿ ಚಳುವಳಿ ನಡೆಸಲಾಯಿತು. ಆಗ ಐ.ಪಿ. ಸಾಂಡರ್ಸ್ ಎಂಬ ಪೊಲೀಸ್ ಅಧಿಕಾರಿ ಹೊಡೆದ ಲಾಟಿ ಏಟಿನಿಂದ ಲಜಪತರಾಯ್ ಗಾಯಗೊಂಡು ನಂತರ ನವೆಂಬರ್ 17, 1928ರಲ್ಲಿ ನಿಧನರಾದರು. ಇದಕ್ಕೆ ಪ್ರತೀಕಾರವಾಗಿ ಡಿಸೆಂಬರ್ 17, 1928 ರಂದು ಸಾಂಡರ್ಸ್‌ನನ್ನು ರಾಜಗುರು ಮತ್ತು ಭಗತ್‌ಸಿಂಗ್ ಗುಂಡಿಟ್ಟು ಕೊಂದರು. 1929ರ ಏಪ್ರಿಲ್ 8 ರಂದು ದೆಹಲಿಯ ಕೇಂದ್ರಿಯ ಶಾಸನಸಭೆಯ ವೀಕ್ಷಕ ಗ್ಯಾಲರಿಯಿಂದ ಎರಡು ಬಾಂಬುಗಳು ಎಸೆಯಲ್ಪಟ್ಟವು ಮತ್ತು ಕೆಲವು ಕರಪತ್ರಗಳನ್ನು ಎಸೆಯಲಾಯಿತು. ತಪ್ಪಿಸಿಕೊಳ್ಳಲು ಪ್ರಯತ್ನಿಸದೆ "ಇಂಕಿಲಾಬ್ ಜಿಂದಾಬಾದ್" ಎಂಬ ಘೋಷಣೆ ಕೂಗುತ್ತಾ ಬಂಧನಕ್ಕೊಳಗಾದ ತರುಣರೇ ಭಗತ್ ಸಿಂಗ್ ಮತ್ತು ಬಿ.ಕೆ. ದತ್. ಸಾಂಡರ್ಸ್‌ನ ಕೊಲೆಯ ಮೊಕದ್ದಮೆಯಲ್ಲಿ ಭಗತ್‌ಸಿಂಗ್, ರಾಜಗುರು ಮತ್ತು ಸುಖ್ ದೇವರಿಗೆ ಮರಣದಂಡನೆ ವಿಧಿಸಲಾಯಿತು. ಅವರನ್ನು ಲಾಹೋರ್‌ನಲ್ಲಿ ಮಾರ್ಚ್ 23, 1931ರಂದು ಗಲ್ಲಿಗೇರಿಸಲಾಯಿತು.
ಹಿಂದೂಸ್ಥಾನ ರಿಪಬ್ಲಿಕನ್ ಅಸೋಸಿಯೇಷನ್ ಪ್ರಮುಖ ಚಟುವಟಿಕೆಗಳಲ್ಲೆಲ್ಲಾ ಪಾಲ್ಗೊಂಡಿದ್ದ ಪ್ರಮುಖರೆಂದರೆ ಚಂದ್ರಶೇಖರ್ ಅಜಾದ್. ಇವರು ಕಾಕೋರಿ ರೈಲು ಡಕಾಯಿತಿ, ವೈಸರಾಯ್ ರೈಲನ್ನು ಸ್ಫೋಟಿಸುವ ಪ್ರಯತ್ನ, ಸ್ಯಾಂಡರ್ಸ್‌ಗೆ ಗುಂಡು ಹೊಡೆದ ಮತ್ತು ದಿಲ್ಲಿ ಪಿತೂರಿಗಳಲ್ಲಿ ಭಾಗಿಯಾಗಿದ್ದರು. ಇವನನ್ನು ಪೊಲೀಸರು ಹುಡುಕುತ್ತಿದ್ದ ಸಂದರ್ಭದಲ್ಲಿ ಅವನ ಸಂಗಾತಿಯೊಬ್ಬನು ಅಜಾದ್‌ರವರ ಚಲನವಲನಗಳ ಬಗ್ಗೆ ಮಾಹಿತಿ ನೀಡಿದ. 1931ನೇ ಫೆಬ್ರವರಿ 27 ರಂದು ಅಲಹಾಬಾದಿನ ಆಲೈಡ್ ಪಾರ್ಕಿನಲ್ಲಿ ಚಂದ್ರಶೇಖರ್ ಕುಳಿತಿದ್ದಾಗ ಶಸ್ತ್ರಸಜ್ಜಿತ ಪೊಲೀಸ್ ತಂಡ ಅವರನ್ನು ಸುತ್ತುವರಿದಿತು. ಅಜಾದ್ ದೃತಿಗೆಡದೆ ತನ್ನ ಪಿಸ್ತೂಲಿನಿಂದ ಗುಂಡಾರಿಸುತ್ತಾ ಪೋಲೀಸರನ್ನು ಹತ್ತಿರ ಬರದಂತೆ ತಡೆದರು. ಕೊನೆಗೆ ಗುಂಡುಗಳು ಮುಗಿದು ಹೋರಾಟ ಅಸಾಧ್ಯವೆಂದೆನಿಸಿದಾಗ ಕೊನೆಯ ಗುಂಡನ್ನು ತಮ್ಮ ತಲೆಗೆ ಹೊಡೆದುಕೊಂಡು ವೀರಸ್ವರ್ಗ ಸೇರಿದರು. ಹೀಗೆ ತಾನೆಂದಿಗೂ ಬ್ರಿಟಿಷರ ಬಂದಿಯಾಗಲಾರೆ ಮತ್ತು ನೇಣುಗಂಬ ಏರಲಾರೆ "ಮೆ ಆಜಾದ್ ಹೊಂ, ಆಜಾದ್ ಹೀ ರಹೊಂಗಾ' (ನಾನು ಸ್ವತಂತ್ರ ಸ್ವತಂತ್ರನಾಗಿಯೇ ಉಳಿಯುವೆ) ಎಂಬ ತಮ್ಮ ಹಿಂದಿನ ಪ್ರತಿಜ್ಞೆಯನ್ನು ಉಳಿಸಿಕೊಂಡರು.
ಚಿತ್ತಗಾಂಗ್ ಶಸ್ತ್ರಾಗಾರ ದಾಳಿ : ಯುವ ಪೀಳಿಗೆಯಲ್ಲಿ ನಡೆದ "ಕ್ರಾಂತಿಕಾರಿ ಗುಂಪುಗಳ" ಚಟುವಟಿಕೆಗಳಲ್ಲಿ ನಡೆದ ನಡೆಯಿತು. ಇವರು ಚಿತ್ತಗಾಂಗ್‌ನ ನ್ಯಾಷನಲ್ ಸ್ಕೂಲ್‌ನಲ್ಲಿ ಉಪಾಧ್ಯಾಯರಾಗಿದ್ದು, ಅಸಹಕಾರ ಚಳುವಳಿಯಲ್ಲಿ ಅತ್ಯಂತ ಪ್ರಮುಖ ಕಾರ್ಯಾಚರಣೆಯೆಂದರೆ ಚಿತ್ತಗಾಂಗ್ ಶಸ್ತ್ರಾಗಾರ ದಾಳಿ. ಇದು ಸೂರ್ಯಸೇನ್ ನೇತೃತ್ವದಲ್ಲಿ ಭಾಗವಹಿಸಿದ್ದರು. ಇವರು ತಮ್ಮ ಅನುಯಾಯಿಗಳಲ್ಲಿ ಮಾಸ್ತರ್‌ದಾ ಎಂದು ಪರಿಚಿತರಾಗಿ 1926-28ರ ವರೆಗೆ ಕ್ರಾಂತಿಕಾರಿ ಚಟುವಟಿಕೆಗಳ ಮೇಲೆ ಸೆರೆಮನೆಯಲ್ಲಿದ್ದರು. ಇವರು ಕಾಂಗ್ರೆಸ್‌ನಲ್ಲೇ ಇದ್ದು ಕೊಂಡು ಕ್ರಾಂತಿಕಾರಿ ತಂಡವನ್ನು ಕಟ್ಟಿದರು. ಈ ಐತಿಹಾಸಿಕ ಕ್ರಾಂತಿಕಾರಕ ಘಟನೆಯು ಏಪ್ರಿಲ್ 18, 1930ರಂದು ಪೂರ್ವ ಬಂಗಾಳದ ಚಿತ್ರಗಾಂಗ್‌ನಲ್ಲಿ ನಡೆಯಿತು. ಅಂದಿನ ರಾತ್ರಿ ಸೂರ್ಯಸೇನರ ಜೊತೆಗಿದ್ದವರು ಅನಂತಸಿಂಗ್, ಅಂಬಿಕಾ ಚಕ್ರವರ್ತಿ, ಲೋಕನಾಥ ಬಾಲ್, ಗಣೇಶ ಘೋಷ್, ಆನಂದ ಗುಪ್ತ, ತೇಗ್ರ ಬಾಲ್ ಮತ್ತು ವೀರ ಮಹಿಳೆಯರಾದ ಕಲ್ಪನಾದತ್, ಪ್ರೀತಿಲತ ವಡೆದಾರ್ ಮುಂತಾದ 64 ಜನ ಅನುಯಾಯಿಗಳು ಚಿತ್ರಗಾಂಗ್ ಶಸ್ತ್ರಾಗಾರವನ್ನು ನಾಲ್ಕು ಮೂಲೆಯಿಂದಲೂ ದಾಳಿ ಮಾಡಿದರು. ಇವರು ಕೋವಿಗಳು ಮತ್ತು ರಿವಾಲ್ವರುಗಳನ್ನು ಹೊಂದಿದ್ದು ಯಾವುದೇ ಅಡಚಣೆಯಿಲ್ಲದೆ ಧಾಳಿ ಮಾಡಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು. ಆದರೆ ಗಡಿಬಿಡಿಯಲ್ಲಿ ಕ್ರಾಂತಿಕಾರರು ಮದ್ದು ಗುಂಡುಗಳನ್ನೊಯ್ಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಮುಂದಿನ ಬ್ರಿಟಿಷ್ ದಾಳಿಯಲ್ಲಿ ಈ ಬಂದೂಕುಗಳು లువయసఁగకే బరలిల, దాళయ సంకర ఈ క్యాంతకారిగళు గుడ గోళల్లి అడగిళ ఉండరు. విత్తిలో 22. 1930 ರಂದು 57 ಮಂದಿ ಕ್ರಾಂತಿಕಾರಿಗಳಿಗೂ ಮತ್ತು ಬ್ರಿಟಿಷ್ ಪಡೆಯ ನಡುವೆ ಉಗ್ರ ಹೋರಾಟ ನಡೆದು 11 ಕ್ರಾಂತಿಕಾರಿಗಳು ಮಡಿದು, 64 ಬ್ರಿಟಿಷ್ ಸೈನಿಕರನ್ನು ಕೊಂದರು, ಸೂರ್ಯಸೇನ್ ಮತ್ತಿತರರು ತಪ್ಪಿಸಿಕೊಂಡು ಚಿಕ್ಕ ಗುಂಪುಗಳಾಗಿ ಹಳ್ಳಿಗಳಲ್ಲಿದ್ದು ಕೊಂಡು ಸರ್ಕಾರಿ ಆಸ್ತಿಪಾಸ್ತಿಗಳ ಮೇಲೆ ದಾಳಿ ಮಾಡಲಾರಂಭಿಸಿದರು. ಸರ್ಕಾರದ ಧಮನಕಾರಿ ಮತ್ತು ದಾಳಿಯ ನಡುವೆಯೂ ಮುಸ್ಲಿಂ ಬಹುಸಂಖ್ಯಾತ ಹಳ್ಳಿಯವರು ಆಹಾರ, ವಸತಿಗಳನ್ನು ನೀರು ಕ್ರಾಂತಿಕಾರಿಗಳು ಮೂರು ವರ್ಷ ಹೋರಾಡಲು ಸಹಾಯ ನೀಡಿದರು. ಅಂತಿಮವಾಗಿ ಸೂರ್ಯಸೇನ್ ಫೆಬ್ರವರಿ 16, 1933 ರಂದು ಸೆರೆಸಿಕ್ಕಿ ವಿಚಾರಣೆ ನಡೆದು ಜನವರಿ 12, 1934 ರಂದು ಅವರನ್ನು ಗಲ್ಲಿ ಗೇರಿಸಲಾಯಿತ ಅವರ ಅನುಯಾಯಿಗಳು ಸೆರೆಸಿಕ್ಕಿ ಧೀರ್ಘ ಸೆರೆವಾಸಕ್ಕೀಡಾದರು. ಈ ದಾಳಿಯು ಬಂಗಾಳದ ಕ್ರಾಂತಿಕಾರಿಗಳ ಮೇಲೆ ಹೆಚ್ಚು ಪ್ರಭಾವ ಬೀರಿ ಮತ್ತಿತರ ಕ್ರಾಂತಿಕಾರಿ ಗುಂಪುಗಳು ತಮ್ಮ ಚಟುವಟಿಕೆಗಳನ್ನು ಹೆಚ್ಚಿಸಲು ಧೈರ್ಯ ತುಂಬಿತು.
ಮುಂದಿನ ಮೂರು ವರ್ಷ ಸರಣಿಯಾಗಿ ಯೂರೋಪಿಯನ್ನರನ್ನು ಕೊಲ್ಲಲು ಪ್ರಾರಂಭವಾಯಿತು. ಜಗನ್ 29, 1930ರಂದು ಢಾಕಾದಲ್ಲಿ ಬಿನಯ್ ಕೃಷ್ಣ ಬೋಸ್ ಪೊಲೀಸ್ ಮುಖ್ಯಾಧಿಕಾರಿಗಳಾದ ಎಫ್.ಜೆ. ಲೋಮನ ಮತ್ತು ಹನ್ಸನ್‌ರನ್ನು ಗಾಯಗೊಳಿಸಿದರು. ಮತ್ತೆ ಬಿನಯ್ ಕೃಷ್ಣ, ಬಾದಲ್ ಮತ್ತು ದಿನೇಶ ಕಲ್ಕತ್ತಾದ 'ರೈಟರ್ ಬಿಲ್ಡಿಂಗ್" ಗೆ ಪ್ರವೇಶಿಸಿ ಕಾರಾಗೃಹ ಮುಖ್ಯಸ್ಥ ಕರ್ನಲ್ ಸಿಂಪ್ಸನ್‌ರನ್ನು ಕೊಂದು ಮೂವರು ಕ್ರಾಂತಿಕಾರಿಗಳು ಮನಸೇಚ್ಛ ಗುಂಡುಗಳನ್ನಾರಿಸಿ ಇಬ್ಬರು ಯೂರೋಪಿಯನ್ ಅಧಿಕಾರಿಗಳನ್ನು ಗಾಯಗೊಳಿಸಿದರು. ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲವೆಂದರಿತು ಬಿನಯ್ ಕೃಷ್ಣ ಮತ್ತು ಬಾದಲ್ ಅಲ್ಲೇ ಗುಂಡಾರಿಸಿಕೊಂಡು ಸತ್ತಮ ದಿನೇಶ ಸೆರೆಸಿಕ್ಕಿದ ನಂತರ ಗಲ್ಲಿಗೇರಿಸಲಾಯಿತು. ಚಿತ್ತಗಾಂಗ್ ಶಸ್ತ್ರಾಗಾರ ಧಾಳಿಯ ಪರಿಣಾಮವಾಗಿ ಸರ್ಕಾರವು ಅನೇಕ ಹಳ್ಳಿಗಳನ್ನು ಸುಟ್ಟು, ಅಧಿಕ ಪುಂಡು ಗಂದಾಯವನ್ನು ವಿಧಿಸಿ ಭಯಂಕರ ಸ್ಥಿತಿಯನ್ನು ನಿರ್ಮಾಣಮಾಡಿತು.
ಈ ಹೊಸ ಹಂತದ ಬಂಗಾಳದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಸ್ತ್ರೀಯರು ಹೆಚ್ಚು ಹೆಚ್ಚಾಗಿ ಭಾಗವಹಿಸಿದರು. ಸೂರ್ಯಸೇನರ ನಾಯಕತ್ವದಲ್ಲಿ ಆಶ್ರಯಪಡೆದು, ಸಂದೇಶಕಾರರಾಗಿ, ಶಸ್ತ್ರಾಸ್ತ್ರಗಳನ್ನು ರಕ್ಷಿಸುವ ಮತ್ತು ಬಂದಲ ಹಿಡಿದು ಹೋರಾಡುವ ಕಾರ್ಯದಲ್ಲೂ ತೊಡಗಿದ್ದರು. ಪ್ರೀತಿಲತಾವಡೇದಾರ್ ದಾಳಿಯ ವೇಳೆಯಲ್ಲಿ ನಿಧನರಾದರು. ಬಂಗಾಳದಲ್ಲಿ 1913ರಲ್ಲಿ ಜನಿಸಿದ ಕಲ್ಪನಾದತ್ ಕೈಬಾಂಬ್ ತಯಾರಿಕೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದಳು. ವಣ ಸೂರ್ಯಸೇನ್‌ರೊಂದಿಗೆ ಸೆರೆಯಾಗಿ ಆಜೀವ ಸೆರೆವಾಸಕ್ಕೀಡಾದಳು. ಶಾಂತಿ ಘೋಷ್ ಮತ್ತು ಸುನೀತಿ ಚೌಡ ಎಂಬ ಕೊಮಿಲ್ಲಾ ಸ್ಕೂಲ್‌ನ ವಿದ್ಯಾರ್ಥಿನಿಯರು ಜಿಲ್ಲಾ ಮ್ಯಾಜಿಸ್ಟ್ರೇಟರನ್ನು ಗುಂಡಿಟ್ಟು ಕೊಂದರು. 1980 ಫೆಬ್ರವರಿಯಲ್ಲಿ ಬೀನಾದಾಸ್ ಘಟಿಕೋತ್ಸವದಲ್ಲಿ ಡಿಗ್ರಿ ಪಡೆಯುವಾಗ ಗವರ್ನ‌್ರನನ್ನು ಗುಂಡಿಟ್ಟು ಕೊಬ್ಬು ಪ್ರಯತ್ನಿಸಿದಳು. ಈ ಹೊಸ ಹಂತದ ಕ್ರಾಂತಿಕಾರಿಗಳು ಭಗತ್‌ಸಿಂಗ್ ಮತ್ತಿತರರಂತೆ ಏಕಾಂಗಿಯಾಗಿ ಹೋರಾತನ ಗುಂಪಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು.
ಈ ಕ್ರಾಂತಿಕಾರಿಗಳ ಉದ್ದೇಶ ಸಾಮ್ರಾಜ್ಯಶಾಹಿ ಆಡಳಿತವನ್ನು . ಕುಸಿಯುವಂತೆ ಮಾಡುವುದು ಮತ್ತು ಆಡಳಿತಾಧಿಕಾರಿಗಳಲ್ಲಿ ನೈತಿಕ ಅದಃ ಪತನವನ್ನುಂಟುಮಾಡುವುದಾಗಿತ್ತು. 1931ರ ನವೆಂಬರ್‌ನಲ್ಲಿ ಸರ್ಕಾರವು ಉಗ್ರಗಾಮಿತ್ವವನ್ನು ತಡೆಗಟ್ಟಲು ತುರ್ತುಪರಿಸ್ಥಿತಿ ಕಾನೂನನ್ನು ಜಾರಿಗೆ ತಂದಿತು. ಆದರೂ ಪ್ರದ್ಯುತ್ ಕುಮಾರ್ ಭಟ್ಟಾಚಾರ್ಯ ಮತ್ತು ಪ್ರೊಬನ್ಸುಪಾಲ್ ಎಂಬುವವರು ಮಿಡ್ನಾಪುರದ ಜಿಲ್ಲಾ ನ್ಯಾಯಾಧೀಶನನ್ನು ಕೊಂದರು.
ಮುಂದುವರೆಯುವುದು.......
No comments:
Post a Comment